ಬ್ಲಾಗಿಗೆ ಬರೆದು ಎರಡು ಮಳೆಗಾಲ ಕಳೆದು ಹೋದವು. ತುಂಬಾ ಸಲ ಏನನ್ನಾದರೂ ಬರೆಯಬೇಕು ಅಂತ ಅಂದುಕೊಳ್ಳುತ್ತೇನಾದರೂ ಹಾಳು ಸೋಮಾರಿತನ ಮತ್ತೆ ಮತ್ತೆ ಅದನ್ನು ಮುಂದೂಡುತ್ತಿತ್ತು. ಇಷ್ಟು ದಿನ ಏನು ಬರೆಯಲಿಲ್ಲವಲ್ಲ ಎನ್ನುವ ಪಶ್ಚಾತಾಪ ಭಾವವೂ, ಏನಾದರೂ ಬರೆಯಬೇಕಿತ್ತು ಎನ್ನುವ ಹಪಹಪಿಯೂ ಈಗ ನನ್ನನ್ನು ಕಾಡುತ್ತಿದೆ.
ನಿಮಗೆ ಲಾಂಗೂರ್ ಮಂಗನ ಕಥೆ ಗೊತ್ತಿರಬಹುದು. ಪ್ರತಿ ವರ್ಷ ಮಳೆಗಾಲ ಬಂದಾಗ ಈ ಮಂಗ ತನ್ನ ಸಂಗಾತಿಗೆ ಹೇಳುತ್ತದೆ. ಈ ಸಲ ಏನಾದರೂ ಸರಿ ಗೂಡು ಕಟ್ಟಿಯೇ ಕಟ್ಟುತ್ತೇನೆ. ಕಳೆದ ಸಲ ಮಳೆ ನೆನೆದ್ದಿದೇ ಸಾಕು. ನಾಳೆ ಬೆಳಿಗ್ಗೆ ಎದ ಕೂಡಲೇ ಮೊದಲು ಅದೇ ಕೆಲಸ ಮಾಡುತ್ತೇನೆ. ಆದರೆ, ಈ ಮಂಗ ಎಷ್ಟು ಸೋಮಾರಿಯೆಂದರೆ ಇಂತಹ ೧೦ ಮಳೆಗಾಲ ಕಳೆದರೂ ಮನೆ ಕಟ್ಟುವುದು ಹೋಗಲಿ ಕುಳಿತ ಮರದಿಂದ ತನ್ನ ಕುಂಡಿ ಸಹ ಅಲಾಡಿಸುವುದಿಲ್ಲ. ಕಳೆದ ಬಾರಿ ಊರಿಗೆ ಹೋದಾಗ ಅಪ್ಪ ನನ್ನ ಬಳಿ ಈ ಕಥೆ ಹೇಳಿ ನಗುತ್ತ್ದಿದರು. ಕಾರಣ ಏನೆಂದರೆ ನಾನು ಪ್ರತಿ ಬಾರಿ ಊರಿಗೆ ಹೋದಾಗಲೂ ಅವರು ನನ್ನ ಬಳಿ ಅದು ಮಾಡು, ಇದು ಮಾಡು ಅಂತ ಏನಾದರೊಂದು ಹೇಳುತ್ತಲೇ ಇರುತ್ತಾರೆ. ನಾನು ಮುಂದೆ ನೋಡುವ, ನಾಳೆ ಮಾಡುವ ಎಂದೆಲ್ಲಾ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿರುತ್ತೇನೆ. ಆದರೆ, ಈ ಬಾರಿ ಅಪ್ಪನ ಹತ್ತಿರ ನನ್ನ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಮಗನೇ, ನಿನಗೆ ವಯಸ್ಸಾಗುತ್ತಿದೆ. ಒಂದು ಮದುವೆ ಅಂತ ಮಾಡಿದರೆ ನಮ್ಮ ಭಾರ ಸ್ಪಲ್ಪ ಇಳಿಯುತ್ತದೆ. ನಿನಗೆ ಜವಾಬ್ದಾರಿಯೂ ಬರುತ್ತದೆ. ಲಾಂಗೂರ್ ಮಂಗನಂತೆ ಕೆಲಸಗಳನ್ನು ಫೋಸ್ಟ್ ಪೋನ್ ಮಾಡುವ ನಿನ್ನ ಆಲಸ್ಯತನವೂ ತಹಬದಿಗೆ ಬರುತ್ತದೆ ಎಂದು ಕಿವಿ ಹಿಂಡ್ದಿದರು. ಮದುವೆ ಎಂದ ಕೂಡಲೇ ನನ್ನ ಎರಡೂ ಕಿವಿಗಳು ನೆಟ್ಟಗಾಗಿ, ಅದರಿಂದ ಆಗುವ ಅನಾಹುತಗಳ ನೆನೆದು ತಲೆಯೂ ಭಾರವಾಗಿ ಸುಮ್ಮನೆ ಕುಳಿತು ಬಿಟ್ಟೆ. ಅದೇನು ಮಹಾ ವಯಸ್ಸಾಯಿತೆಂದು ನನಗೀಗ ಮದುವೆ, ಎಂಬ ಮಾತು ಬಾಯಿಗೆ ಬಂದರೂ ಅಪ್ಪ ನಾನು ಬಾಯಿ ತೆರೆಯುವುದಕ್ಕೆ ಅವಕಾಶವನ್ನೇ ಕೊಡಲಿಲ್ಲ. ನೋಡು ಇನ್ನು ೬ ತಿಂಗಳಲ್ಲಿ ನಿನ್ನ ಮದುವೆ ಮಾಡಿಯೇ ತೀರುತ್ತೇವೆ. ಒಂದೋ ನೀನೇ ಹುಡುಗಿ ಹುಡುಕಿಕೋ ಅಥವಾ ನಾವೇ ಹುಡುಕ್ದಿದನ್ನು ಒಪ್ಪಿಕೋ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು. ಅಷ್ಟೇ ಅಲ್ಲ, ಮರು ದಿನವೇ ಚರ್ಚಿಗೆ ಹೋಗಿ ವಿವಾಹ ಪೂರ್ವ ತರಬೇತಿ ಪಡೆಯಲು ಅಗತ್ಯವಿರುವ ಪ್ರಮಾಣ ಪತ್ರವನ್ನೂ ಪಾದ್ರಿಗಳಿಂದ ತಂದುಕೊಟ್ಟರು. (ಈ ಕುರಿತು ಹಿಂದೆ ಬರೆದಿದ್ದೆ ಇಲ್ಲಿ ಓದಿಕೊಳ್ಳಿ)
ಅಂದು ರಾತ್ರಿಯಿಡಿ ನನಗೆ ನಿದ್ರೆಯೇ ಬರಲಿಲ್ಲ. ಮದುವೆಯಾದ ಹೆಣ್ಣನ್ನು ತಾಳಿ ನೋಡಿ ಗುರುತಿಸಬಹುದು, ಮದುವೆಯಾದ ಗಂಡನ್ನು ಹ್ಯಾಪುಮೋರೆ ಮತ್ತು ಪೆಚ್ಚು ನಗೆಯಿಂದ ಗುರುತಿಸಬಹುದು’ ಎಂದು ಹಿಂದೆ ಯಾರೋ ಹೇಳಿದ ಜೋಕನ್ನು ನೆನಪು ಮಾಡಿಕೊಂಡು, ನನಗೆ ಒದಗಬಹುದಾದ ಅವಸ್ಥೆ ನೆನೆದುಕೊಂಡು ಮಲಗಿದೆ. ಒಂದೆರಡು ದಿನ ಕಳೆದ ಮತ್ತೆ ನಮ್ಮ ಕರ್ಮಭೂಮಿ ಬೆಂಗಳೂರಿಗೆ ವಾಪಸ್ ಬಂದೆ. ಶುರುವಾಯಿತು ಮದುವೆ ಪ್ರಪೋಸಲ್‌ಗಳ ಪ್ರವಾಹ. ರಾಜ್ಯದ ನಾನಾ ಭಾಗಗಳಿಂದ ಬಂದ ವಿವಾಹ ಪ್ರಸ್ತಾವಗಳನ್ನು ಅಪ್ಪ-ಅಮ್ಮ ಪರಿಷ್ಕರಿಸಿ ನನಗೆ ದಿನಂಪ್ರತಿ ವರದಿ ಒಪ್ಪಿಸುತ್ತಿದ್ದರು. ನಾನು ಏನಾದರೊಂದು ನೆವ ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ಯಾಕೊ ಎರಡು ದಿನ ಕಳೆಯುವಷ್ಟರಲ್ಲಿ ಇವರು ನನಗೆ ಮದುವೆ ಮಾಡಿಯೇ ತೀರುತ್ತಾರೆ ಎಂದು ಬಲವಾಗಿ ಅನಿಸಲು ಶುರುವಾಯಿತು. ಕೊನೆಗೆ ನಾನೇ ಮಣಿದು, ಸರಿ ಹಾಗಾದರೆ, ನನಗೆ ಹುಡುಗಿಯ ನಂಬರ್ ಕೊಡಿ ಅಥವಾ ಹುಡುಗಿಗೆ ನನ್ನ ನಂಬರ್ ಕೊಡಿ. ನೇರವಾಗಿ ಮಾತನಾಡಿ ಅಂತಿಮ ನಿರ್ಧಾರಕ್ಕೆ ಬರುತ್ತೇನೆ ಎಂದೆ.
ನನ್ನ ಸ್ನೇಹಿತರಲ್ಲಿ ಅನೇಕರು ನನ್ನ ಅವಸ್ಥೆ ನೋಡಿ, ಮರುಕವನ್ನೂ, ವಿಷಾದವನ್ನೂ, ಸಂತೋಷವನ್ನೂ ವ್ಯಕ್ತಪಡಿಸಿದರು. ಮದುವೆ ಆದ ಕೆಲವರು ’ಮೊದಲ್ಲೆಲ ಹಾಗೆ, ಈಗ ನೋಡು, ನಾವೆ ನಮ್ಮ ಹೆಂಡತಿಯರಿಗೆ ಹೊಂದಿಕೊಂಡಿಲ್ವಾ? ಅಂತ ಸಮಾಧಾನ ಮಾಡಿದರು. ‘ಎಲ್ಲ ಹುಡುಗಿಯರು ನಿಮ್ಮ ಕಣ್ಣಿಗೆ ಸುಂದರಿಯರಾಗಿ ಕಾಣುವ ಸಮಯದಲ್ಲೇ ಮದುವೆಯಾಗಬೇಕು’. ಮದುವೆಗೆ ಮನಸ್ಸು ಅಣಿಗೊಂಡಾಗ ಎಲ್ಲರೂ ಚೆಲುವೆಯರಾಗಿಯೇ ಕಾಣುತ್ತಾರೆ’ ಎಂದು ಗೆಳೆಯ ಪ್ರಶಾಂತ್ ತನ್ನ ವಯಸ್ಸಿಗೂ ಮೀರಿದ ಅಮೂಲ್ಯ ಸಲಹೆ ನೀಡಿದ. ಬೆಂಗಳೂರಿನ ಸಮಸ್ತ ಸುಂದರಿಯರೆಲ್ಲ ಇಲ್ಲೇ ಮೆರವಣಿಗೆ ಹೊರಟ್ದಿದಾರೇನೋ ಎನ್ನುವಂತೆ ಸಂಜೆ ಮ್ಲಲೇಶ್ವರದ ಸ್ಯಾಂಕಿ ಕರೆ ಸುತ್ತ ವಾಕಿಂಗ್ ಹೊರಟ ಹುಡುಗಿಯರು ತಕ್ಷಣ ನನ್ನ ತಲೆಯೊಳಗೆ ನಡೆದು ಹೋದರು. ಇವರಲ್ಲಿ ಯಾರಾದರೂ ಆಗಬಹುದೇ ಎಂದುಕೊಂಡೆ. ಹಿಂದೆ ಇದೇ ಹುಡುಗಿಯರ ಬಗ್ಗೆ ಒಂದು ಕಥೆ ಬರೆಯಬೇಕೆಂದು ನಾನು ಗೆಳೆಯ ಸೂರ್ಯ ಇಬ್ಬರೂ ಸೇರಿ ಒಂದೆರಡು ವಾರ ಸ್ಯಾಂಕಿ ಕೆರೆ ಸುತ್ತಿ ಬಂದ್ದಿದೆವು! (ಅದೊಂದು ಬೇರೆ ಕಥೆ!).
ಹೀಗಿರಲು ಒಂದು ದಿನ ದಕ್ಷಿಣ ಕನ್ನಡದಿಂದ ಮದುವೆ ಬ್ರೋಕರ್ ಒಬ್ಬರು ಫೋನ್ ಮಾಡಿ ಹುಡುಗಿಯೊಬ್ಬಳ ನಂಬರ್ ಕೊಟ್ಟರು. ನಾನು ಆ ನಂಬರ್ ಪಡೆದುಕೊಂಡು ಎರಡು ದಿನ ಸುಮ್ಮನೆ ಕಳೆದೆ. ಆಮೇಲೆ ಒಂದು ದಿನ ಫೋನ್ ಮಾಡಿದೆ. ಕರೆ ಸ್ವೀರಿಸಿದ ಹುಡುಗಿ ನೇರವಾಗಿಯೇ ಮಾತನಾಡಿದಳು. ನನಗೆ ಯಾಕೋ ಈ ಹುಡುಗಿ ಕೂಡ ನನ್ನ ತರಾನೇ ಯೋಚನೆ ಮಾಡುವವಳು, ಪರವಾಗಿಲ್ಲ ಅಂತ ಅನಿಸತೊಡಗಿತು. ಒಬ್ಬ ಬಡ ಪತ್ರಕರ್ತನಾದ ನನ್ನನ್ನು ಮದುವೆಯಾದರೆ ಎದುರಿಸಬೇಕಾಗಿ ಬರಬಹುದಾದ ಸವಾಲುಗಳನ್ನು ತಿಳಿ ಹೇಳಿ ನೋಡಿದೆ. ಸವಾಲು ಸ್ವೀಕರಿಸಲು ಸಿದ್ಧಳಿದ್ದ ಹಾಗಿತ್ತು ಹುಡುಗಿಯ ಧ್ವನಿ. ಒಂದು ದಿನ ಮುಖತಃ ಮಾತನಾಡೋಣ ಅಂದೆ. ಆಯಿತು ಅದಕ್ಕೇನಂತೆ ಅಂದರು. ನನ್ನ ಗೆಳೆಯ ಆಕೆಯ ಹೆಸರು ಹೇಳ್ದಿದೇ ತಡ ಫೇಸ್‌ಬುಕ್ ಜಾಲಾಡಿ ಚಿತ್ರ, ವಿಳಾಸ, ಇತ್ಯಾದಿ ಸಮಗ್ರ ಮಾಹಿತಿಗಳನ್ನು ಹುಡುಕಿ ಕೊಟ್ಟು ಇವರೇ ನೋಡಿ ಅವರು ಎಂದ. ಮಲ್ಲಿಗೆಯಂತ ಮ್ದುದು ಮುಖದ ಹುಡುಗಿ. ನನಗೆ ಯಾಕೋ ಈ ಹುಡುಗಿ ತುಂಬಾ ಪಾಪ ಇರಬೇಕು ಅಂತ ಅನಿಸಿತು. ಸುಮ್ಮನೆ ಕಿಚಾಯಿಸಲು ಕೇಳಿದೆ. ಅದಕ್ಕೆ ಅವರು ಅಷ್ಟೇನೂ ಪಾಪ ಅಲ್ಲ, ಸ್ವಲ್ಪ ಜೋರು ಇದೀನಿ ಅಂದರು. (ಮದುವೆ ಆದ ಮೇಲೆ ಹುಡುಗಿಯರೆಲ್ಲ ಜೋರಾಗುತ್ತಾರಂತೆ) ಒಂದು ವಾರ ಕಳೆದು ಮುಖತಃ ಭೇಟಿಯಾಯಿತು. ಮಾತುಕತೆ ನಡೆಯಿತು. ಹುಡುಗಿಗೆ ಏನೋ ಹೇಳಲು ಸಂಕಟ. ನಾನು ಒತ್ತಾಯ ಮಾಡಲಿಲ್ಲ. ಎರಡು ದಿನ ಕಳೆದ ಬ್ರೋಕರ್ ಫೋನ್ ಮಾಡಿ ವಿಷಯ ಹೇಳಿದರು. ಹೀಗಂತೆ.. ಅದಕ್ಕೆ ಅವರಿಗೆ ಸ್ವಲ್ಪ ಸಮಯ ಬೇಕಂತೆ ಅಂದರು... ಆಯಿತು ಎಂದೆ. ಹೀಗೆ ಮುಗಿಯಿತು ನನ್ನ ಮೊದಲ ಮದುವೆ ಪ್ರಪೋಸಲ್..!
ಈಗ ನಾನು ನಮ್ಮ ಮನೆಯ ಕಿಟಕಿಯ ಸರಳುಗಳಿಂದ ಹೊರಗೆ ಕಣ್ಣು ಹಾಯಿಸಿ, ಸುರಿಯುತ್ತಾ ಇರುವ ಮಳೆಯನ್ನೇ ನೋಡುತ್ತಾ ನಿಂತ್ದಿದೇನೆ. ಹುಡುಗಿ ಕೂಡ ಈ ಮಳೆಯಂತೆಯೇ ಆರ್ದ್ರವಾಗಿ, ಭಾವುಕಳಾಗಿ, ಸ್ನಿಗ್ದ ಸೌಂದರ್ಯ ದೇವತೆಯಾಗಿ ಇದ್ದರೆ ಎಷ್ಟು ಚೆಂದ ಅನಿಸುತ್ತದೆ. ಹಾಗೆ ಯೋಚಿಸುವಾಗಲೆಲ್ಲ ಹೊರಗೆ ಮೋಡ ಕವಿದ ವಾತಾವರಣವೂ ಆಪ್ತವಾಗಿ, ಅಪ್ಯಾಯಮಾನವಾಗಿ ಕಾಣುತ್ತದೆ. ಮನಸ್ಸು ಉಲ್ಲಾಸಗೊಂಡು ಮತ್ತೊಂದು ಖುಷಿಯ ಮಗ್ಗುಲಿಗೆ ಜಿಗಿಯಲು ಅಣಿಗೊಳ್ಳುತ್ತದೆ.
ಮತ್ತೆ ಮೊಬೈಲ್ ರಿಂಗ್ ಆಗುತ್ತಿದೆ. ಊರಿನಿಂದ ಅಪ್ಪ ಫೋನ್ ಮಾಡುತ್ತಿದ್ದಾರೆ... ಮತ್ತೊಂದು ಮದುವೆ ಪ್ರಪೋಸಲ್ ಇರಬಹುದು..-:)