ಒಂದಿಡಿ ರಾತ್ರಿ ವಿಚಾರ ಮಾಡಿದರೂ ಬ್ಲಾಗಿಗೆ ಹೊಸದಾಗಿ ಏನನ್ನು ಬರೆಯುವುದು ಎಂದು ಗೊತ್ತಾಗಲಿಲ್ಲ. ಏನಾದರೂ ಮಾಡಿ ಬ್ಲಾಗ್ ಅಫ್ಡೇಟ್ ಮಾಡಬೇಕಲ್ಲಪ್ಪಾ ಎಂದು ಚಿಂತಿದ್ದೇ ಆಯಿತು, ಏನೂ ಹೊಳೆಯಲಿಲ್ಲ. ಪರಿಚಿತರ ಬ್ಲಾಗಿಗೆಲ್ಲ ಭೇಟಿ ಕೊಟ್ಟು ನೋಡಿದೆ, ಅವರೆಲ್ಲಾ ತಿಂಗಳಿಗೊಂದಾದರೂ ಪೋಸ್ಟ್ ಹಾಕುತ್ತಾ ನನಗಿಂತ ಆದಾಗಲೇ ತುಂಬಾ ದೂರ ಹೋಗಿದ್ದರು. ಕೊನೆಯ ಬಸ್ಸಿಗೆ ಉಳಿದವನು ನಾನೊಬ್ಬನೇ. ಏನ್ರೀ ಬ್ಲಾಗಿಗೆ ಹೊಸದಾಗಿ ಏನೂ ಬರೆದಿಲ್ಲವಲ್ರೀ ಎಂದು ಸಹೋದ್ಯೋಗಿಗಳು ಕೇಳಿದರು. ಟೈಮಿಲ್ಲ ಎಂದು ಎಷ್ಟನೆಯ ಬಾರಿ ಸುಳ್ಳು ಹೇಳುವುದು, ಜನವರಿಯಲ್ಲಿ ಅಫ್ಡೇಟ್ ಆಗಿದ್ದು ಜೂನ್ ಆದರೂ ಹಾಗೇ ಇದೆಯೆಂದರೆ ನಿನ್ನ ಬ್ಲಾಗ್ ಪಂಚವಾರ್ಷಿಕ ಯೋಜನೆಯದಾ ಎಂದರು. ನಾನು, ತಡೀರಿ ಸಾರ್ ಇನ್ನೇನು ಹೊಸ ಭಾವ, ಹೊಸ ಬೆಡಗಿನೊಂದಿಗೆ ಬರಲಿದೆ ಎಂದು ಸಮರ್ಥನೆಯ ನಗು ಬೀರಿದೆ.
ಈ ಬ್ಲಾಗಮಂಡಲದ ದೊಡ್ಡ ಅಪಾಯವೆಂದರೆ ನಾವೇನಾದರೂ ಹೊಸ ಪೋಸ್ಟ್ ಹಾಕಲು ಎರಡು ಮೂರು ತಿಂಗಳು ತಡಮಾಡಿದರೆ ಉಳಿದ ಬ್ಲಾಗಿಗರು ನಮ್ಮನ್ನು ಗುಂಪಿನಿಂದ ನೋಟೀಸು ಕೂಡ ಕೊಡದೆ ಹೊರಹಾಕಿ ಬಿಡುತ್ತಾರೆ. ಕಳೆದ ಮೂರು ತಿಂಗಳಿಂದ ನನ್ನ ಸ್ಥಿತಿ ಹೆಚ್ಚೂ ಕಮ್ಮಿ ಹೀಗೇ ಇದೆ. ಯಾರೂ ನನ್ನ ಬ್ಲಾಗಿನಂಗಳಕ್ಕೆ ಬರುತ್ತಿಲ್ಲ, ಬರುತ್ತಿಲ್ಲ ಅಂದರೆ ನಾನು ಏನನ್ನೂ ಹೊಸದಾಗಿ ಬರೆದಿಲ್ಲ. ಉಳಿದಿರುವ ದಾರಿ ಒಂದೇ. ಹಳೆಯ ಲೇಖನಕ್ಕೆ ಬಂದ ಕಮೆಂಟುಗಳನ್ನೇ ನಾಲ್ಕೈದು ಬಾರಿ ಓದಿಕೊಳ್ಳುವುದು. ಹಾಗೆ ಓದಿದಾಗ ಸ್ಪಲ್ಪ ಸಮಾಧಾನವೆನಿಸಿತು. ಈ ಜಾಲಿಗರೆಲ್ಲ ಯಾವುದೋ ಒಂದು ಕಾಲದಲ್ಲಿ ಹತ್ತಿರದ ಸಂಬಂಧಿಗಳಾಗಿದ್ದರು ಎನ್ನುವುದು ನೆನಪಾಯಿತು. ಆದರೆ ಈಗ ನಮ್ಮ ಬ್ಲಾಗಿನ ಮೇಲಿನಿಂದಲೇ ಹಾರಿ ಪಕ್ಕದ ಬ್ಲಾಗಿನಲ್ಲಿ ಇಳಿದು ಕಮೆಂಟಿಸುವ ಇವರನ್ನು ಮುಂದೊಂದು ಕೈ ನೋಡಿಕೊಳ್ಳೋಣ ಎಂದು ಸುಮ್ಮನಾಗಿದ್ದೇನೆ. ಊರಿಗೆ ಬಂದವಳು ನೀರಿಗೆ ಬರೆದೆ ಇರುತ್ತಾಳೆಯೇ? ಓದುಗರನ್ನು ಉಳಿಸಿಕೊಳ್ಳಲು ನಾನೂ ಹಲವು ಕಸರತ್ತು ನಡೆಸಿದೆ. ಹೋಮ್ಪೇಜ್ ಬದಲಿಸಿದೆ. ಒಂದೆರಡು ಲಿಂಕ್ಸ್ಗಳನ್ನು ಹೆಚ್ಚಿಗೆ ಕೊಟ್ಟೆ. ಯಾರೂ ಪ್ರಲೋಭನೆಗೆ ಒಳಗಾಗಲಿಲ್ಲ. ಇವೆಲ್ಲಾ ಮಾಮೂಲಿ ಎಂಬಂತೆ ಕಿಟಕಿಯಲ್ಲಿ ನಕ್ಕರು.
ನೋಡಿದರೆ ನನಗೆ ಕವಿತೆ ಬರೆಯಲು ಬರುವುದಿಲ್ಲ. ಇಲ್ಲವಾದರೆ ಪುಟ್ಟ ಪುಟ್ಟ ಕವಿತೆಗಳನ್ನಾದರೂ ಬರೆದು ಬಿಟ್ಟ ಸ್ಥಳ ತುಂಬಿಸಬಹುದಿತ್ತು. ಕಥೆ ಬರೆಯೋಣವೆಂದರೆ ಆ ಸಾಹಸ ನೀನು ಮಾಡದಿರುವುದೇ ಒಳಿತು ಎಂದು ಒಬ್ಬರು ಬಾಯಿ ಮುಚ್ಚಿಸಿದರು. ವಿಮರ್ಶೆ, ಟಿಪ್ಪಣಿ ಇತ್ಯಾದಿ ಮಾಡೋಣವೆಂದರೆ ಈಗಾಗಲೇ ಬ್ಲಾಗಿನಲ್ಲಿ ಈ ಕುರಿತು ತೀವ್ರಗತಿಯ ಚರ್ಚೆಗಳು ನಡೆದು ಹಲವು ಸೃಜನಶೀಲ ಬ್ಲಾಗಿಗರು ಇಂತಹ ಅನಗತ್ಯ ಚರ್ಚೆಗಳಿಂದ ಬೇಸೆತ್ತು ಹೋಗಿದ್ದಾರೆ. ಸರಿ ಪ್ರವಾಸ, ಚಾರಣ ಅಂತ ಎಲ್ಲಿಗಾದರೂ ಹೋಗಿ ಬರೋಣವೆಂದರೆ ಅದಕ್ಕೆ ಟೈಮಿಲ್ಲ. ಮತ್ತೆ ಏನು ಬರೆಯೋದು? ಯಾಕೋ ಡಲ್ಲಾಗಿ ಕುಳಿತಿದ್ದ ಮೈಸೂರಿನ ಪೋಸ್ಟಿನ ಮಾಲೀಕರನ್ನು ಕೇಳಿದೆ. ಸಾರ್ ನೀವು ನಿಮ್ಮ ಬ್ಲಾಗಿಗೆ ಹೊಸದಾಗಿ ಏನಾದರೂ ಬರೆದಿದ್ದೀರಾ? ವಾರಕ್ಕೊಮ್ಮೆ ಲೇ ಔಟ್ ಚೇಂಜ್ ಮಾಡ್ತಾ ಇದ್ದೀನಿ ಎಂದರು. ಅರೆ! ಈ ಐಡಿಯಾ ನನಗೆ ಹೊಳದೇ ಇಲ್ಲವಲ್ಲಾ ಎನ್ನುತ್ತಾ, ಅವರ ಬ್ಲಾಗ್ ತೆರೆದು ನೋಡಿದೆ. ಅವರು ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬರೆದ ಲೇಖನಗಳಿದ್ದವು.
ಅಮೀರ್ಖಾನ್ ಖಾಹ್ರುಕ್ ಎಂಬ ನಾಯಿಯ ಬಗ್ಗೆ ಆತನ ಬ್ಲಾಗಿನಲ್ಲಿ ಬರೆದ ಲೇಖನಕ್ಕೆ ಏಳುಸಾವಿರದ ಐದುನೂರಕ್ಕೂ ಹೆಚ್ಚು ಕಮೆಂಟುಗಳು ಬರುತ್ತವೆ. ಕನ್ನಡದ ಬ್ಲಾಗಿಗರೆಲ್ಲರೂ ಸೇರಿ Hutch ನಾಯಿಯ ಬಗ್ಗೆ ಬರೆದರೂ ಈ ಪಾಟಿ ಪ್ರತಿಕ್ರಿಯೆಗಳು ಬರಲಿಕ್ಕಿಲ್ಲ. ಆದರೂ ಕನ್ನಡದಲ್ಲಿ ಚೆನ್ನಾಗಿ ಬರೆದು ಐವತ್ತು ಅರವತ್ತು ಕಮಂಟು ಗಿಟ್ಟಿಸುವ ಅಫ್ಡೇಟ್ ಬ್ಲಾಗಿಗರನ್ನು ನೋಡುವಾಗ ಸ್ವಲ್ಪ ಹೊಟ್ಟೆಕಿಚ್ಚು ಹುಟ್ಟುತ್ತದೆ. ಈ ಕಮೆಂಟು ಮಾಡುವಲ್ಲಿಯೂ ದೊಡ್ಡದೊಂದು ಲಾಭಿ ಇದೆ ಎಂದು ಪ್ರಗತಿಪರ ಬ್ಲಾಗಿಗರೊಬ್ಬರು ಇತ್ತೀಚೆಗೆ ಹೇಳಿದರು. ಅದರ ಸತ್ಯಾಸತ್ಯೆತೆ ಗೊತ್ತಿಲ್ಲ, ಈಗ ಚುನಾವಣೆಯ ಸಮಯವಾದ್ದರಿಂದ ಅನಕ ಪತ್ರಕರ್ತ ಬ್ಲಾಗಿಗರು ಪತ್ರಿಕೆಯ ಕೆಲಸಗಳಲ್ಲೇ ಬ್ಯುಸಿಯಾಗಿದ್ದಾರೆ. ಅಣ್ಣಗಳಿರಾ, ಅಕ್ಕಂದಿರಾ, ನನ್ನ ಬ್ಲಾಗ್ ಅಫ್ಡೇಟ್ ಆಗಿದೆ. ಮುಂದಿನ ಪೋಸ್ಟ್ ಬಹು ಬೇಗ ಹಾಕುತ್ತೇನೆ, ಎಲ್ಲಿಗೂ ಹೋಗಬೇಡಿ, ಅಲ್ಲಿಗೆ ಬಂದವರು ಇಲ್ಲಿಗೂ ಒಮ್ಮೆ ಬಂದು ಹೋಗಿ...
22 comments:
ಜೋಮನ್ ಅವರೆ,
ಬರಹ ಓದಿ ನಗುವೂ ಬಂತು ಜೊತೆಗೆ ಸಂತೋಷವೂ ಆಯಿತು.. ನಿಮ್ಮ ಮನದೊಳಗಿನ ಭಾವನೆಗಳನ್ನು ನೇರವಾಗಿ, ಸರಳವಾಗಿ ಪ್ರಾಮಾಣಿಕವಾಗಿ ಬಿತ್ತರಿಸಿದ್ದಕ್ಕೆ. ಖಂಡಿತ ನಾನಂತೂ ತಪ್ಪದೇ ಎಲ್ಲಿ ಹೋದರೂ ಇಲ್ಲಿಯೂ ಭೇಟಿಕೊಡುವೆ ;-)
nice try eh:)) sumne next postu bEga kuTTi, hingella emotional blackmailing maaDo badlu;)
ಜೋಮನ್, ನಿಮ್ಮ ಗೋಳು ಓದಿ ನಗು ಬಂತು. ;) ಬೇಗ ಹೊಸ ಪೋಸ್ಟ್ ಹಾಕಿ. ಅದಿಲ್ಲಾಂದ್ರೆ ನಾವೂ ನಿಮ್ಮನ್ನ ವಿಚಾರಿಸ್ಕೋಬೇಕಾಗತ್ತೆ! :D
ಬರೆಯೊದಕ್ಕೆ ವಿಷಯಗಳಿಲ್ಲ ಅಥವ ಒಲವಿಲ್ಲ ಅನ್ನೊ ವಿಚಾರವಾದರು ಸಿಕ್ಕಿತಲ್ಲ ಬಿಡಿ ನಿಮಗೆ. ನಿಮ್ಮ ಬ್ಲಾಗಿಗೆ ಯಾರು ಬರುತ್ತಿಲ್ಲ ಅನ್ನೊ ಅಪಾದನೆಯನ್ನ:P ನಾನು ಒಪ್ಪೊದಿಲ್ಲ .... ಅಲ್ಲ ಮೊನ್ನೆಯಷ್ಟೆ ನಿಮ್ಮ "ನಿಜವಾದ ಚಿನ್ನ...." ಬರಹಕ್ಕೆ ಕಮೆಂಟಿಸಿದ್ದೆ, ನೀವು ಗಮನಿಸಿಲ್ಲ ಅನ್ಸುತ್ತೆ....... :))
:-)
Odugara bagge tale kediskObEDi.. nim paDige nivu baritha hOgi...
blog andre patrike enalla. namgansiddu navu en bekadru barkondraythu ashte...
ನಮಗಂತೂ ಬ್ಲಾಗು ಬರೆಯೋದಕ್ಕೆ ಪುರುಸೊತಿಲ್ಲ. ಯಾರಾದರೂ ಒಳ್ಳೇ ಬ್ಲಾಗ್ ಇದು ಓದಿ ಅಂದ್ರೆ ಖಂಡಿತ ಒದ್ಥೀವಿ ಟೈಮ್ ಆದ್ರೆ ಕಾಮೆಂಟ್ ಕೂಡ ಕೊಡ್ತೀವಿ. ನಿಮ್ ಬ್ಲಾಗು ತುಂಬಾ ಚೆನ್ನಾಗಿದೆ.ಹೀಗೆ ಬರೀತಾ ಇರಿ.
ಈ ಪೋಸ್ಟು ಹಾಕಿದಾಗ ಓದುಗರು ಇಷ್ಟು ವೇಗ ಕಮೆಂಟಿಸುತ್ತಾರೆ ಎಂದು ನಾನು ಯೋಚಿಸಿಯೂ ಇರಲಿಲ್ಲ. ಪೋಸ್ಟ್ ಹಾಕಿ ರಾತ್ರಿ ಕಳೆಯುವುದರೊಳಗೆ ಆರು ಪ್ರತಿಕ್ರಿಯೆಗಳು ಬಂದಿದ್ದವು. ಪುಟ್ಟ ಪುಟ್ಟ ಆತ್ಮೀಯ ಪ್ರತಿಕ್ರಿಯೆಗಳು. ನಾನಂತೂ ಒಬ್ಬರನ್ನೊ ನೋಡಿಲ್ಲ. ಆದರೆ ಎಲ್ಲರೂ ತುಂಬಾ ಆತ್ಮೀಯವಾಗಿ ಪ್ರತಿಕ್ರಿಯಿಸಿದ್ದರು. ಬಹುಶಃ ಬೇರೆ ಯಾವ ಭಾಷೆಗಳ ಬ್ಲಾಗಿನಲ್ಲಿಯೂ ಈ ರೀತಿ ಓದುಗರ ನಡುವೆ ಆತ್ಮೀಯ ಸಂವಾದ ಏರ್ಪಪಡುವುದಿಲ್ಲ ಅನಿಸುತ್ತೆ.
@ ತೇಜಸ್ವಿನಿ ಹೆಗಡೆ,
ತುಂಬಾ ಧನ್ಯವಾದಗಳು. ನೀವು ತಪ್ಪದೆ ಬರಲೇಬೇಕು. ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಯಿತು.
@ ಶ್ರೀ..
ಏನ್ರೀ ಪ್ರೀತಿಯಿಂದ ಧಮಕಿ ಬೇರೆ ಹಾಕಿದ್ದೀರಾ, ಮುಂದಿನ ಪೋಸ್ಟ್ ಬೇಗನೆ ಕುಟ್ಟುತ್ತೇನೆ. ಧನ್ಯವಾದಗಳು.
@ ಸುಶ್ರುತ ದೊಡ್ಡೇರಿ..
ಆತ್ಮೀಯ ಸುಶ್ರುತ ಅವರೇ, ನನ್ನ ಗೋಳು ನಿಮಗಾದರೂ ಅರ್ಥವಾಯಿತಲ್ಲ ಅಂತ ಸಮಾಧಾನ ಆಗ್ತಿದೆ. ನೀವು ವಿಚಾರಿಸಿಕೊಳ್ಳುವ ಮೊದಲು ನಾನೇ ಹೊಸ ಬರಹದೊಂದಿಗೆ ಬರುತ್ತೇನೆ. ತುಂಬಾ ಧನ್ಯವಾದಗಳು.
@ ಅಮರ...
ಅಮರ ಅವರೇ ನಾನು ಗಮನಿಸಿದ್ದೆ, ಹಾಗೆ ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯೂ ಆಗಿತ್ತು. ಮುಂದೆಯೂ ಬರುತ್ತಲಿರಿ..
@ ವಿಕಾಸ ಹೆಗಡೆ,
ಹೆಗಡೆಯವರೇ ನಿಮ್ಮ ಸಹೃದಯ ಓದಿಗೆ, ಪ್ರತಿಕ್ರಿಯೆಗೆ ಧನ್ಯವಾದಗಳು. ಬ್ಲಾಗಿಗೆ ಆಗಾಗ್ಗ ಬರುತ್ತಲಿರಿ.
@ ಮಾನಸ,
ಮಳೆಹನಿಗೆ ನಿಮಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಯಿತು. ಬರುತ್ತಲಿರಿ... ಧನ್ಯವಾದಗಳು.
ಜೋಮನ್,
ನನ್ನ ಬ್ಲಾಗ್ ರೋಲ್ ನಿಂದ ’ಮಳೆಹನಿ’ಯನ್ನು ತೆಗೆದುಹಾಕುವ ಇರಾದೆ ನನಗಿಲ್ಲ! ನಿಶ್ಚಿಂತೆಯಿಂದ ಇರಿ. ಆದರೆ ಆಗಾಗ ಬರೆಯುತ್ತಾ ಇರೀಪ್ಪಾ.
ನಿಮ್ಮ ಬ್ಲಾಗ್ ಬರಹಗಳು ಬಹಳ ದಿನ ನಮ್ಮ ಹೃದಯವನ್ನು ಕಾಡುತ್ತಾ ಹಿಡಿದಿಡುವುದರಿಂದ ನೀವು ತಡವಾಗಿ ಬರೆದರೂ ಆಕ್ಷೇಪವಿಲ್ಲ. ಆದರೆ Out of sight out of mind ಆಗದಂತೆ ಬಿಡುವು ಮಾಡಿಕೊಂಡು ಬರೆಯುತ್ತಿರಿ. ಆಗಾಗ ಭೇಟಿಯಾಗಿ ಮತ್ತೆ ಮತ್ತೆ ಓದಬಹುದಾದ ಬರಹಗಳು ನಿಮ್ಮ ಬ್ಲಾಗಲ್ಲಿರುವುದರಿಂದ ನಿಮ್ಮನ್ನು ನಾವು ಮರೆಯುವಂತಿಲ್ಲ. ಶುಭವಾಗಲಿ.
ಒಲವಿನಿಂದ
ಬಾನಾಡಿ
@ ನಾಯ್ಕ್ರೇ ನೀವು ಧೈರ್ಯ ತುಂಬಿದ ಮೇಲೆ ಇನ್ಯಾರ ಭಯ!ಪ್ರತಿಕ್ರಿಯೆ ಹಾಗೂ ಆಶ್ವಾಸನೆ ನೋಡಿ ಪುಲ್ ಖುಷ್.
@ ಬಾನಾಡಿ,
ಆತ್ಮೀಯ ಬಾನಾಡಿಯವರೇ ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾನೆ ಖುಷಿಯಾಯಿತು. ನನ್ನ ಬರಹಗಳ ಕುರಿತು ನಿಮ್ಮ ಆತ್ಮೀಯತೆಗೆ ಧನ್ಯವಾದಗಳು.
ಮೊದಮೊದಲು ನನಗೂ ಕಮೆಂಟು ಬರದಿದ್ದರೆ ನನ್ನ ಬರವ್ಣಿಗೆಯ ಸಾಮರ್ಥ್ಯದ ಬಗ್ಗೆನೇ ನನಗೆ ಅನುಮಾನಗಳು ಬರುತ್ತಿದ್ದವು. ಪ್ರತಿ ಕಮೆಂಟಿಗೂ ಭಲೇ ಆಸ್ಥೆಯಿಂದ ಉತ್ತರಿಸುತ್ತಿದ್ದೆ. ಈಗ ಅಷ್ಟು ಆಸಕ್ತಿಯೂ ಇಲ್ಲಾ ಮತ್ತು ಒಮ್ಮೊಮ್ಮೆ ಸರಕು ಇಲ್ಲ ಅನಿಸುತ್ತೆ.
ಹಿಂಗೇ ಹರಟೆ ಹೊಡೆದಿದ್ದು ಸಾಕು. ಮುಂದಿನ ಬರಹದತ್ತ ಚಿತ್ತ ಹರಿಸಿ-ಜಿತೇಂದ್ರ
hello joman,
naanu hosaba... ide nanna modala comment... thumba chennagi barediddiri... samaya sikkare nanna ondu lekahan bareyuve....
Ree joman shabre modlu blog update madri aamele... Comment etc...
Hige heldtidini anta Ninenu baredu gudde hakidiya kelabeda matt
\
ನಮಸ್ಕಾರ ಜೋಮನ್, ನಿಮಗೊಂದು ಆಹ್ವಾನ ಪತ್ರಿಕೆ.
ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.
ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.
http://saadhaara.com/events/index/english
http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.
ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.
ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.
ನಿಮ್ಮ ಬೆಂಗಳೂರುವಾಸಿ ಸ್ನೇಹಿತರಿಗೆ link forward ಮಾಡಿ ಕನ್ನಡದ ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ಸಹಕರಿಸಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.
ಗುರು
-ಕನ್ನಡಸಾಹಿತ್ಯ.ಕಾಂ ಬಳಗ
ಪ್ರೀತಿಯ ಜೋಮೊನ್...
ಇಷ್ಟು ಚಂದ ಬರೆಯುವ ನಿಮ್ಮ ಬ್ಲಾಗಿನ ತಾಣವನ್ನು ಯಾರಾದ್ರೂ ಮರೆತಾರೆಯೇ?
ಬಂದು ಹೊಸಬರಹ ಕಾಣದೇ ಹಿಂದಿನ ಮಳೆಹನಿಗಳ(ಲ್ಲೇ)ನ್ನೇ ನೆನೆದು ಮರಳಿದ್ದಿದೆ.
"ಬಾಲ್ಯದ ನೆನಪುಗಳು" ಸಾಕಲ್ಲವೇ? ಮತ್ತೊಂದು ಪೋಸ್ಟಿನ ವಿಷಯಕ್ಕೆ!
ಬರೆಯುತ್ತಲಿರಿ.
ಜೋಮನ್ನರ ಹೊಸ ಬರಹಗಳು 'ಹೊಸದಾಗಿ' ಬರಲಿ, ಹೊಸೆದ ಹಾಗೆ ಬರಲಿ ಎಂದು ಹಾರೈಸುವ...
ನಿಮ್ಮವ
ಗಣೇಶ್.ಕೆ
@ ಸಂತೋಷಕುಮಾರ,
ಬರವಣಿಗೆಯ ಸಾಮರ್ಥ್ಯ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತದೆ. ಎಲ್ಲರೂ ಒಂದೇ ರೀತಿ ಬರೆಯುತ್ತಿದ್ದರೆ ಯಾರೂ ಇಷ್ಟು ಆಸಕ್ತಿಯಿಂದ ಓದುತ್ತಿರಲಿಲ್ಲ. . ಬರೆಯುವ ಒಂದು ಕ್ರಿಯೆಯಷ್ಟೇ ಓದುವುದು ಮುಖ್ಯವಲ್ಲವೇ? ನಿಮ್ಮ ಪ್ರತಿಕ್ರಿಯೆ ನನಗಂತೂ ಅಮೂಲ್ಯ. ಆಗಾಗ್ಗ ಬರುತ್ತಲಿರಿ.
@ ಧನ್ಯವಾದಗಳು ಜಿತೇಂದ್ರ,
ನಿಮ್ಮ ಪ್ರತಿಕ್ರಿಯೆ ಓದಿದ ನಂತರ ಸೀರಿಯಸ್ ಆಗಲು ಪ್ರಯತ್ನಿಸುತ್ತಿದ್ದೇನೆ:)
@ ತಿಪ್ಪಾರ,
ನಿಮ್ಮನ್ನು ಹಾಗೆಯೇ ಕೇಳೋಣ ಅಂತಿದ್ದೆ. ಆದರೆ ಕೇಳುವ ಮೊದಲೇ ನೀವೇ ಶರಣಾಗಿದ್ದೀರಲ್ಲಾ? ಪ್ರತಿಕ್ರಿಯೆಗೆ ಧನ್ಯವಾದಗಳು.:)
@ ವಿಶಾಲ್,
ಧನ್ಯವಾದಗಳು ವಿಶಾಲ್, ನಿಮ್ಮ ಪ್ರತಿಕ್ರಿಯೆಗೆ ನೋಡಿ ಖುಷಿಯಾಯಿತು. ಆಗಾಗ್ಗ ಬರುತ್ತಿರಿ.
@ ಶಾಂತಲ ಭಂಡಿ,
ನನ್ನ ಬ್ಲಾಗಿನಲ್ಲಿ ನೀವು ಕಾಣಿಸ್ತಾನೇ ಇಲ್ಲ ಅಂತ ವಿಚಾರ ಮಾಡುತ್ತಿದ್ದ ಹೊತ್ತಲ್ಲೇ ನಿಮ್ಮ ಪ್ರತಿಕ್ರಿಯೆ ಬಂದಿದೆ. ಖುಷಿಯಾಯಿತು. ನಿಮ್ಮ ಸಹೃದಯ ಓದಿಗೆ ಪ್ರತಿಕ್ರಿಯೆಗೆ ಧನ್ಯವಾದಗಳು.
@ ಗಣೇಶ,
ಗಣೇಶ್, ನಿಮ್ಮ ಹಾರೈಕೆಗೆ ಧನ್ಯವಾದಗಳು. ಆಗಾಗ್ಗ ಮಳೆಹನಿಗೆ ಬರುತ್ತಿರಿ.
ಮತ್ತೆ ಈ ಪೋಸ್ಟ್ ಕೂಡ ಹಾಕಿ ಆಗಲೇ ಒಂದು ತಿಂಗಳಾಯ್ತಲ್ಲಾ :-(
ಮಳೆ ಮತ್ತೆ ನಿಂತೇ ಹೋಗಿದೆ! ಮುಂಗಾರು ಶುರುವಾಗಲಿ ಬೇಗ :)
ಕ್ಷಮಿಸಿ ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ. ನಿಮಗೆ ಬಂದ ಕಾಮೆಂಟ್ ಗಳ ಸಂಖ್ಯೆಯೆ ನಿಮ್ಮ ಬ್ಲಾಗ್ ನ ಜನಪ್ರಿಯತೆಯನ್ನ್ ಸೂಚಿಸುತ್ತದೆ. ನಿಮ್ಮ ಬರಹಗಳಿಗೆ ಧನ್ಯವಾದಗಳು ;)
ಸಾರ್,
ನಿಮ್ಮ ಸಮಸ್ಯೆಯೇ ನನ್ನ ಸಮಸ್ಯೆ ಆಗಿತ್ತು. ಮುಂದೆ ಎಲ್ಲಾ ಸರಿಹೋಯಿತು. ನನ್ನ ಬ್ಲಾಗಿನಲ್ಲಿ ಹೊಸಟೋಪಿಗಳು ಬಂದಿವೆ. ಬನ್ನಿ.
Post a Comment