ಚಿತ್ರದಲ್ಲಿರುವ ಈ ಕಿಲಾಡಿಯ ಹೆಸರು ರೋಸ್ಮಿನ್. ನನ್ನ ಅಣ್ಣನ ಮಗಳು. ಮೂರು ವರ್ಷ ಮುಗಿಸಿ ನಾಲ್ಕಕ್ಕೆ ಹತ್ತಿರದಲ್ಲಿದ್ದಾಳೆ. ಟಿವಿಯಲ್ಲಿ ಯಾವಾಗಲೂ ಟಾಮ್ ಆಂಡ್ ಜೆರ್ರಿ ಬರುತ್ತಿರಬೇಕು ಎನ್ನುವುದು ಇವಳ ಹಠ. ಮನೆಯಲ್ಲಿ ಬೇರೆ ಯಾವ ಚಾನೆಲ್ ನೋಡಲು ಬಿಡುವುದಿಲ್ಲ. ರಿಮೋಟ್ ಅವಳ ಕೈಯಲ್ಲಿರಬೇಕು. ಈ ಬಾರಿ ಊರಿಗೆ ಹೋದಾಗ ನನ್ನ ಫೋಟೋ ತೆಗಿ ಅಂತ ತನ್ನ ಹುಳುಕು ಹಲ್ಲು ತೋರಿಸಿ ನಕ್ಕಿದ್ದಳು. ಕ್ಯಾಮರ ಕೈಗೆತ್ತಿಕೊಂಡು ಅವಳನ್ನು ಒಂದೆಡೆ ನಿಲ್ಲಿಸಲು ಪ್ರಯತ್ನ ಪಟ್ಟೆ. ಅವಳು ನಿಲ್ಲಲಿಲ್ಲ, ಅಂಗಳದಲ್ಲಿ ಓಡುತ್ತಲೇ ಇದ್ದಳು. ಓಟದ ನಡುವೆ ಕ್ಲಿಕ್ಕಿಸಿದ ಚಿತ್ರಗಳಿವು.
Tuesday, 20 May 2008
Subscribe to:
Post Comments (Atom)
3 comments:
ಎರಡು ತಿಂಗಳ ನಂತರ ಹೊಸ ಬರಹ ನೋಡಿ ಖುಶಿಯಾಯಿತು. ಫೋಟೊಗಳು ಚೆನ್ನಾಗಿವೆ.........
Got linked to ur blog via tinazone. Read some of ur earlier articles. Really very good :)
@ಜಿತೇಂದ್ರ,
ಧನ್ಯವಾದಗಳು ಜಿತೇಂದ್ರ. ಎರಡು ತಿಂಗಳು ಯಾವ ಪೋಸ್ಟ್ ಹಾಕದೆ ಇದ್ದಿದ್ದಕ್ಕೆ ಬ್ಲಾಗ್ ನಿವಾಸಿಗಳೆಲ್ಲಾ ನಮ್ಮನ್ನು ಮರೆತು ಬಿಟ್ಟಿದ್ದಾರೆ. ನಿಮ್ಮ ಕೆಮೆಂಟ್ ನೋಡಿ ಖುಷಿಯಾಯಿತು. ಬರುತ್ತಲಿರಿ.
@ ರಾಧಿಕ,
ನಿಮ್ಮ ಸಹೃದಯ ಓದಿಗೆ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು. ಮಳೆಹನಿಗೆ ಸ್ವಾಗತ. ಆಗಾಗ್ಗ ಬರುತ್ತಲಿರಿ...
ಜೋಮನ್.
Post a Comment