ಬಿಸಿಲು ಚಿನ್ನದ ಬಣ್ಣಕ್ಕೆ ತಿರುಗುವ ಹೊತ್ತಿಗೆ ನಾನು ಇಲ್ಲಿನ ಎಂಜಿ ರಸ್ತೆಯಲ್ಲಿರುವ ಇಂಡಿಯನ್ ಕಾಫಿಹೌಸ್‌ನಲ್ಲಿ ಕುಳಿತು ಬೆಂಗಳೂರನ್ನು ಅಪಾರ ಮೋಹದಿಂದ ನೋಡುತ್ತಿದ್ದೆ. ಮೈಮೇಲೆ ಎಚ್ಚರವಿಲ್ಲದೆ ಧಾವಿಸುವ ಹರೆಯದ ಹುಡುಗ ಹುಡುಗಿಯರು, ಪರಸ್ಪರ ಸೊಂಟ ಬಳಸಿ ನಡೆಯುವ ಪ್ರೇಮಿಗಳು, ಬ್ರಿಗೇಡ್ ರಸ್ತೆಯ ಕೆಂಪು, ಹಸಿರು ನಿಯಾನ್ ದೀಪಗಳಲ್ಲಿ ಯೌವನ ಉಕ್ಕಿಸುವ ತರುಣಿಯರು, ಸಂಜೆಗತ್ತಲಿಗೆ ಅಮಲು ತರಿಸುವಂತೆ ಹಾರುವ ಮುಂಗುರುಳುಗಳು ಎಲ್ಲವನ್ನೂ ತಣ್ಣನೆಯ ಅಸೂಯೆಯಿಂದ ನೋಡುತ್ತಿದ್ದೆ.
‘ಮೂಡಣದಂತೆ ಬೆಚ್ಚಗೆ, ಆದರೆ ಗ್ರೀಷ್ಮದಂತೆ ತಣ್ಣಗಿರಬೇಕು ನನ್ನ ಕಾವ್ಯ’ ಎಂದು ಹೇಳಿದ ಏಟ್ಸ್ ಕವಿ ಈ ಸಂಜೆಯ ಹೊತ್ತಿಗೆ ನೆನಪಾಗುತ್ತಾನೆ. ಏಟ್ಸ್‌ನನ್ನು ನಾನು ಹೆಚ್ಚು ಓದಿಕೊಂಡಿಲ್ಲ. ಆದರೆ ಅವನನ್ನು ಇಷ್ಟಪಡುವವರು ಆತನ ಕುರಿತು ಬರೆದಿದ್ದನ್ನು ಓದಿದ್ದೇನೆ. ‘ಮನುಷ್ಯನ ಮನಸ್ಸು ಯಾವ ಹೆಣ್ಣನ್ನು ಕುರಿತು ಹೆಚ್ಚು ಧ್ಯಾನಿಸುತ್ತದೆ, ಆತನಿಗೆ ಒಲಿದ ಹೆಣ್ಣನ್ನೋ, ಆತನಿಗೆ ಒಲಿಯದೇ ಹೋದ ಹೆಣ್ಣನ್ನೋ?’ ಎಂದು ಕೇಳುತ್ತಾನೆ ಏಟ್ಸ್? ನನಗೆ ನಗು ಬರುತ್ತದೆ. ಏಟ್ಸ್ ಸತ್ತು ಹೋಗಿದ್ದು ಡಿಸೆಂಬರ್‌ನ ಚಳಿಗಾಲದಲ್ಲಂತೆ. ‘ಎಲ್ಲಾ ಹಿಮಚ್ಛಾದಿತ ಗಿರಿಬನಗಳೂ, ಮಂಜು ಕವಿದ ವಿಮಾನ ನಿಲ್ದಾಣಗಳೂ ತಿಳಿಯಲಿ ನನ್ನ ಪ್ರೀತಿಯ ಕವಿ ಈ ಚಳಿಯಲ್ಲಿ ನಿಶ್ಯಬ್ಧನಾಗಿದ್ದಾನೆ ಎಂದು’ ಎಂದು ಏಟ್ಸ್ ತೀರಿಕೊಂಡಾಗ ಆಡೆನ್ ಬರೆದಿದ್ದರು. ಹೀಗೆ ಎನೇನೋ ಯೋಚನೆ ಮಾಡಿಕೊಂಡು ಬಿಎಮ್‌ಟಿಸಿ ಬಸ್ಸು ಹತ್ತಿದ್ದೆ.
ಥಟ್ಟನೆ ಆದಾಗಲೇ ನಾನು ಬೆಂಗಳೂರಿಗೆ ಬಂದು ಒಂದು ತಿಂಗಳು ಕಳೆಯಿತಲ್ಲ ಎನ್ನುವ ಜ್ಞಾನೋದಯವಾಯಿತು. ಮೊನ್ನೆ ಬ್ಲಾಗಿನಲ್ಲಿ ತುಂಬಾ ದಿನಗಳಿಂದ ಏನೂ ಬರೆಯದಿದ್ದಿದಕ್ಕೆ ಚಿತ್ರಾ ಅವರು ಮತ್ತೆಲ್ಲಿ ಕೆಲಸಕ್ಕೆ ರಾಜಿನಾಮೆಕೊಟ್ಟು ಊರಿಗೆ ಹೋಗಿದ್ದೀರಾ ಎಂದು ಕೇಳಿದ್ದರು. ಬ್ಲಾಗ್ ಬರೆಯುವುದು ಹೋಗಲಿ ಮೇಡಂ, ಬೆಂಗಳೂರಿನಲ್ಲಿ ಕೆಲಸ ಮಾಡುವರ ಅರ್ಧ ಆಯಸ್ಸು ಬಿಎಂಟಿಸಿ ಬಸ್ಸುಗಳಲ್ಲೇ ಕಳೆದುಹೋಗುತ್ತಿದೆ ಅಂತ ಅನಿಸುವಾಗ ವಾಪಾಸ್ಸು ಊರಿಗೇ ಹೋಗಿಬಿಡುವ ಅನಿಸುತ್ತದೆ. ಟ್ರಾಫಿಕ್ ಸಿಗ್ನಲ್ ಬಿದ್ದಾಗ ಕಾಲಿನಲ್ಲಿ ತೆವಳುತ್ತಾ ಕೈ ಚಾಚುವ ಮಹಿಳೆಯನ್ನು ನೋಡುತ್ತಾ ನಿಲ್ಲುತ್ತೇನೆ. ‘ಎಲ್ಲಿ ನೋವಿದೆಯೋ ಅಲ್ಲಿ ಸಾಂತ್ವನವನ್ನೂ, ಎಲ್ಲಿ ದು:ಖವಿದೆಯೋ ಅಲ್ಲಿ ಸುಖವನ್ನೂ ಹಂಚೋಣ ’ ಎಂದು ಹೇಳಿದ ಮದರ್ ತೆರೇಸಾ ನೆನಪಾಗುತ್ತಾರೆ. ‘ನೀವು ಒಳ್ಳೆಯವರಾದ್ರೆ ನಿಮ್ಮನ್ನು ಎಲ್ಲರೂ ಪ್ರೀತಿಸುತ್ತಾರೆ’ ಎಂದು ನನ್ನ ಪಿಯುಸಿ ಆಟೋಗ್ರಾಫ್‌ನಲ್ಲಿ ಬರೆದು, ನಾನು ಸುಮ್ಮನೆ ಎನೋನೋ ಕನಸು ಕಾಣುವಂತೆ ಮಾಡಿದ ಹುಡುಗಿಯೂ ಯಾಕೋ ಸುಮ್ಮನೆ ಈಗ ನೆನಪಾಗುತ್ತಿದ್ದಾಳೆ.
ಚೆನೈನ ಕೋಡಂಬಕ್ಕಂನ ವಿಸ್ತರಣೆಯಂತಿರುವ ಬೆಂಗಳೂರಿನ ಈ ಮರಿಯಪ್ಪನಪಾಳ್ಯದಲ್ಲಿ ನಾವು ರೂಮು ಮಾಡಿಕೊಂಡಿದ್ದೇವೆ. ನೈಟ್‌ಶಿಪ್ಟ್ ಮುಗಿಸಿ ಬೆಳಿಗ್ಗೆ ಹನ್ನೊಂದು ಗಂಟೆಗೆ ಎಳುವ ಹವ್ಯಾಸವಿರುವ ನನಗೆ ಬಂದ ದಿನದಿಂದ ಇಲ್ಲಿನ ಹುಂಜವೊಂದು ಕಾಟ ಕೊಡುತ್ತಿದೆ. ಸಾಮಾನ್ಯ ಎಲ್ಲ ಕೋಳಿಗಳು ಬೆಳಗಿನ ಜಾವ ಐದಕ್ಕೆಲ್ಲಾ ಕೂಗಿದರೆ ಈ ಹುಂಜ ರಾತ್ರಿ ಎರಡು ಗಂಟೆಯಿಂದಲೇ ತನ್ನ ಅಲಾರಾಂ ಮೊಳಗಿಸಲು ಪ್ರಾರಂಭಿಸುತ್ತದೆ. ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ಪಕ್ಕದ ಮೆಜೆಸ್ಟಿಕ್‌ವರೆಗೂ ಕೇಳಿಸುವಂತೆ ಕೋಳಿ ಕೂಗುತ್ತದೆ. ಒಮ್ಮೆ ಕೂಗಿ ನಿಲ್ಲಿಸುವುದಿಲ್ಲ. ಕೋಳಿಯ ನಿಲಯದ ಪ್ರಸಾರ ಬೆಳಗಿನ ಜಾವ ಐದುಗಂಟೆಯವರೆಗೆ ಮುಂದುವರೆಯುತ್ತದೆ. ಈ ಓಣಿಯಿಂದಲೂ ಸುಖವಿಲ್ಲ, ಕೋಳಿಯಿಂದಲೂ ಸಮಾಧಾನವಿಲ್ಲ ಎನ್ನುವಂತಾಗಿದೆ ನಮ್ಮ ಸ್ಥಿತಿ.
‘ಎಲಾ ಮರಿಯಪ್ಪನಪಾಳ್ಯದ ಹುಂಜವೇ, ನೀನು ಮಧ್ಯರಾತ್ರಿ ಕೂಗುವುದು ನಿಲ್ಲಿಸದಿದ್ದರೆ, ನಿನ್ನ ಬಗ್ಗೆ ಬ್ಲಾಗಿನಲ್ಲಿ ಬರೆದು ನಿನ್ನ ಮಾನ ಹರಾಜು ಹಾಕುತ್ತೇನೆ ಎಂದು ಅದಕ್ಕೆ ಹೇಳಿ ಬಂದಿದ್ದೇನೆ. ಅಷ್ಟಕ್ಕೂ ಕೂಗುವುದು ನಿಲ್ಲಿಸದಿದ್ದರೆ ಇಲ್ಲೇ ಪಕ್ಕದ ಓಣಿಯಲ್ಲಿರುವ ಛಾಯಾಕನ್ನಡಿಯ ಶಿವು ಅವರನ್ನು ಕರೆತಂದು ನಿನ್ನ ಚಿತ್ರ ತೆಗೆದು ಪತ್ರಿಕೆಯಲ್ಲಿ ಹಾಕುತ್ತೇನೆ ಎಂದು ಹೆದರಿಸಿದ್ದೇನೆ. ಆದರೂ ಅದು ಕೂಗುವುದನ್ನು ನಿಲ್ಲಿಸುವಂತೆ ಕಾಣಿಸುತ್ತಿಲ್ಲ. ನಿಮಗೆ ಯಾರಿಗಾದರೂ ಈ ಕೋಳಿಯ ಕೂಗನ್ನು ನಿಲ್ಲಿಸುವ ಐಡಿಯಾ ಗೊತ್ತಿದ್ದರೆ ತಿಳಿಸಿ.
Tuesday, 3 February 2009
Subscribe to:
Post Comments (Atom)
23 comments:
Chanda barediddeera... Ishta aythu :)
wonderful, keep writing
ಕೂಗೋ...ಕೋಳಿಗೆ ಖಾರಾ ಮಸಾಲೆ...ಖಾರಾ ಮಸಾಲೆ... ಎಂದು ಹಾಡಿ ನೋಡಿ...:೦)
ಅಶೋಕ ಉಚ್ಚಂಗಿ
http://mysoremallige01.blogspot.com/
ಜೋಮನ್,
ಮೊದಲ ಪ್ಯಾರಾ ಓದಿ ನಿಮ್ಮ ಮೇಲೆ (ಇಲ್ಲಿ ದೂರದ ಇಂಗ್ಲಂಡಿನ ಹಿಮಾಚ್ಛಾದಿತ ಕತ್ತಲಲ್ಲಿ ಹುಡುಗಿಯರಿರಲಿ, ಮನುಷ್ಯರೇ ಕಾಣುವುದಿಲ್ಲ) ಮತ್ತು ನಿಮ್ಮ ಬರವಣಿಗೆಯ ಮೇಲೆ (ಅಷ್ಟು ಚಂದ ಬರೆದಿದ್ದೀರಲ್ಲ!) ಅಸೂಯೆಯಾಗುತ್ತಿದೆ.
ಕೇಶವ (www.kannada-nudi.blogspot.com)
ಜೋಮನ್,
ಎಂ ಜಿ ರಸ್ತೆಯಲ್ಲಿ ಓಡಾಡುವವರನ್ನು ಕಂಡರೆ ಆಸೂಯೆ ಬೇಡ...ಅವರೆಲ್ಲರೂ ಇನ್ನೊಬ್ಬರನ್ನು ಮೆಚ್ಚಿಸಿಲಿಕ್ಕಾಗಿ ಆ ರೀತಿ ಬಟ್ಟೆ, ವೇಷ, ನಡುವಳಿಕೆ ಬದಲಿಸಿರುತ್ತಾರೆ ಹೊರತು...ಅವರಿಗೋಸ್ಕರ ಅಲ್ಲವೇ...ಅವರು ನಮಗೇ ಜೀವನ್ಮಿಖಿ ಮಾಡಲ್ಲುಗಳು ಅಲ್ಲ....ಅವರನ್ನೆಲ್ಲಾ ಯಕ್ಷಗಾನದ ಗೊಂಬೆಗಳಂತೆ ಹೋಲಿಸಿಕೊಂಡು enjoy ಮಾಡಿ....
ಇನ್ನು ನಿಮ್ಮ ಕೋಳಿಹುಂಚವು ನಿಮ್ಮಂತೆ ಬ್ರಹ್ಮ ಚಾರಿಯಾದ್ದರಿಂದ ಅದು over time ಕೆಲಸ ಮಾಡುತ್ತಿದೆ...ಅದರ ಜೊತೆಗೆ ಒಂದು ಯ್ಯಾಟೆ ಕೋಳಿ[ಹೆಣ್ಣು]ಜೊತೆಯಾದರೆ ಅದು ರೋಮಾನ್ಸಿನಲ್ಲಿ ಬೀಳುವುದರಿಂದ...ನಿಮ್ಮ ನಿದ್ರೆಗೆ ತೊಂದರೆ ಇಲ್ಲವಾಗುತ್ತದೆ...ಇನ್ನೊಂದು ವಿಚಾರ ನಾನು ಬಂದು ಆ ಕೋಳಿಹುಂಜದ ಫೋಟೊ ತೆಗೆದು ಬ್ಲಾಗ್ ಅಥವ ಪತ್ರಿಕೆಯಲ್ಲಿ ಹಾಕಿಸಿದರೆ ಅದರ ಮಾರ್ಕೆಟ್ ವ್ಯಾಲ್ಯು [ಗಣೇಶನಂತೆ]ಜಾಸ್ತಿಯಾಗಿ...೨೪ ಗಂಟೆ ಕೂಗುವ ಕೆಲಸ ಮಾಡಿದರೆ ಏನು ಗತಿ.?!!
ಅದ್ಯಾವ ಹುಂಜ ಮಾರಾಯಾ? ನಾನೂ ಮರಿಯಪ್ಪನಪಾಳ್ಯದ ಹತ್ತಿರವೇ ಇರೋದು. ಹುಂಜ ಸಾಯಲಿ, ಒಂದು ಹೇಂಟೆ ಸಹ ಕಂಡಿಲ್ಲ ನಂಗೆ..
ನಿಂಗೆ ಚಿಕನ್ ಇಷ್ಟವಾ? ನೋಡು, ಟ್ರೈ ಮಾಡಣ್ಣ:)
ಹ್ಹ ಹ್ಹ ಹ್ಹ.. ನಿಮ್ ಅಡ್ರೆಸ್ ಕೊಡ್ರೀ.. ಹುಂಜದ ವಿಷ್ಯ ನಾವ್ ನೋಡ್ಕೋತೀವಿ. :) ಇಲ್ಲಾಂದ್ರೆ ಆ ಹುಂಜಕ್ಕೊಂದು ಕೋಳಿ ಸೆಟಪ್ ಮಾಡ್ಕೊಡಿ, ಸುಮ್ನಾಗ್ಬೋದೇನೋ!!
ಹಂಗೇ ಬ್ಲಾಗ್ ಬಗ್ಗೆನೂ ಗಮನ ಕೊಡಿ ಸ್ವಲ್ಪ . :)
ಜೋಮನ್ ,
ನನ್ನ ವಿನಂತಿಗೆ ಬೆಲೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು !
ಬಹಳ ದಿನಗಳ ನಂತರ ನಿಮ್ಮ ಲವಲವಿಕೆಯ ಬರಹ ಓದಿ ಖುಷಿಯಾಯಿತು. ಹೇಗೂ ನಿಮ್ಮ ಓಣಿಯ ಕೋಳಿ ನಿಮ್ಮನ್ನು ನಿದ್ದೆ ಮಾಡಲೂ ಬಿಡದೆ ಏಳಿಸುತ್ತದೆ ಅಂತಾಯ್ತು. ಆಗೆಲ್ಲ ಒಂದೊಂದು ಲೇಖನ ಬರೆದು ಬ್ಲಾಗಿಗೆ ಹಾಕಿ. ಬಹುಶಃ ಕೋಳಿಗೂ ನೀವು ಬ್ಲಾಗ್ ಬರೆಯದ ಬಗ್ಗೆ ಕಸಿವಿಸಿ ಆಗಿರಬಹು ದು !ಅದೂ ಇದೂ ಹೇಳಿ ಹೆದರಿಸುವ ಬದಲು , ಆ ಕೋಳಿಗೆ ಬ್ಲಾಗ್ ಬರೆಯುತ್ತೇನೆ ಬಾಯಿಮುಚ್ಚು ಎಂದು ಹೇಳಿ. ಸುಮ್ಮನಾಗಬಹುದೇನೋ !! :)
ಇದೊಳ್ಳೆ ಕಥೆ ಮಾರಾಯ..ಬೆಂಗಳೂರಿಗೆ ಬಂದು ಬೆಂಗಳೂರನ್ನು ಎಲ್ಲಾ ಕೋನದಿಂದಲೂ ನೋಡಿಬಿಟ್ಟಿಯಲ್ಲಾ..! ಹುಂಜ ಕಾಟನಾ..ಅದಕ್ಕೆ ಶ್ರೀನಿಧಿ ಹೇಳಿದ ಐಡಿಯಾನೇ ಬೆಟರ್ರು...ಮಾರಾಯ. ಮಟಾಸ್ ಮಾಡಿಬಿಡು..ಬೇಕಾದ್ರೆ ತಿನ್ನೋಕೆ ನಾ ಸಹಾಯ ಮಾಡ್ತೀನಿ..ಹಿಹಿಹಿ..(:)
-ಚಿತ್ರಾ
ಸರ್,
ಹಿಂಗೇ ಮೈಸೂರ್ ಕಡೆ ಬರೋವಾಗ ಆ ಹುಂಜಾನ ಮರೀದೆ ಹಿಡ್ಕೊಂಡ್ ಬನ್ನಿ....!
-ಜಿತೇಂದ್ರ
@ಗುರುಮೂರ್ತಿ ಹೆಗಡೆ
ಗುರುಮೂರ್ತಿ ಹೆಗಡೆಯವರಿಗೆ ನಮಸ್ಕಾರ. ಮಳೆಹನಿಗೆ ಸ್ವಾಗತ. ನಿಮ್ಮ ಸಹೃದಯ ಓದು ಪ್ರತಿಕ್ರಿಯೆಗೆ ಧನ್ಯವಾದಗಳು.
@ಅಶೋಕ ಉಚ್ಚಂಗಿ,
ಕೂಗೋ ಕೋಳಿಗೆ ಖಾರಾ ಮಸಾಲೆ... ವಂಡರ್‌ಫುಲ್. :)
@ಶಿವು
ನೀವು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಬೇಕಿತ್ತು ಕಣ್ರಿ, ತಪ್ಪಿ ಫೋಟೋಗ್ರಾಫರ್ ಆಗಿದ್ದೀರ. ಕೋಳಿಯ ಕೂಗಿಗೆ ಮಾರ್ಕೆಟ್ ವ್ಯಾಲ್ಯೂ ಕಲ್ಪಿಸಿದ ನಿಮ್ಮ ತಲೆಗೊಂದು ಸಲಾಂ. ಎಂಜಿ ರಸ್ತೆ ಬಿಡಿ. ಅದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿಲ್ಲ.
@ಸುಶ್ರತ..
ಗುರುಗಳೇ ನಮ್ಮ ಓಣಿಯ/ಕೋಳಿಯ ಮರ್ಯಾದೆ ಕಳೆದೀರಿ ನೀವು. ಬಿಡುವಿದ್ದಾಗ ಮಧ್ಯ(ದ್ಯ) ರಾತ್ರಿ ಇಲ್ಲಿಗೊಮ್ಮೆ ಬನ್ನಿ, ಹುಂಜವನ್ನು ತೋರಿಸುತ್ತೇನೆ.
@ ವಿಕಾಸ್..
ಹುಂಜದ ದೆಸೆಯಿಂದ ನನ್ನ ಬ್ಲಾಗ್ ಕಡೆ ಗಮನ ಹರಿಸಲು ಆಗಿರಲಿಲ್ಲ. ಅದಕ್ಕೊಂದು ಜೋಡಿ ಸೆಟೆಪ್ ಮಾಡಲು ಹೆಲ್ಪ್ ಮಾಡಿ. ಈಗ ಹುಂಜಾಯ: ನಮ: ಎಂದು ಹಾಡಿಕೊಂಡಿದ್ದೇನೆ.
@ಪೂರ್ಣಿಮಾ ಭಟ್
ಮಳೆಹನಿಗೆ ಮತ್ತೊಮ್ಮೆ ಸ್ವಾಗತ. ನಿಮ್ಮ ಸಹೃದಯ ಓದು ಪ್ರತಿಕ್ರಿಯೆಗೆ ಧನ್ಯವಾದಗಳು.
@ ಕೇಶವ ಕುಲಕರ್ಣಿ
ಸರ್ ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು. ನಿಮ್ಮ ಸಹೃದಯ ಅಸೂಯೆಗೆ ತುಂಬಾನೆ ಧನ್ಯವಾದಗಳು. ಬರುತ್ತಲಿರಿ..
@ ಶ್ರೀನಿಧಿ
ಚಿತ್ರ ಕರ್ಕೆರಾ ಅವರು ಈಗಾಗಲೇ ಈ ಹುಂಜದ ಮಾಲೀಕರನ್ನು ಸಂಪರ್ಕಿಸಿ ಅದನ್ನು ಬಿರಿಯಾಣಿ ಮಾಡುವ ಸಿದ್ದತೆಯಲ್ಲಿದ್ದಾರೆ. ನೀವು ಅವರನ್ನು ಕೂಡಲೇ ಸಂಪರ್ಕಿಸಬಹುದು.
@ಚಿತ್ರಾ,
ನಿಮಗೂ ಕೂಡ ಧನ್ಯವಾದ. ಕೋಳಿಯ ನೆವದಿಂದ ಬ್ಲಾಗ್ ಅಪ್‌ಡೇಟ್ ಮಾಡುವ ಐಡಿಯಾ ಏನೋ ಚೆನ್ನಾಗಿದೆ. ಆದರೆ ಅದು ವರ್ಕ್‌ಔಟ್ ಆಗತ್ತಾ?
@ಚಿತ್ರಾ ಕರ್ಕೆರಾ
ನೀವು ಶ್ರೀನಿಧಿ ಅವರ ಸಹಾಯ ಪಡೆಯತಕ್ಕದ್ದು. ಕೊನೆಗೆ ಇಬ್ಬರೂ ಸೇರಿ ಹುಂಜದ ಗರಿಯನ್ನಾದರೂ ಉಳಿಸಿ.... :)
@ಜಿತೇಂದ್ರ
ಮೈಸೂರಿನಲ್ಲಿ ಯಾವುದಾದರೂ ಹೇಂಟೆ ಸಿಕ್ಕಿದರೆ ಇತ್ತ ಕಳುಹಿಸಿಕೊಡಿ ಮರಾಯ್ರೆ...
ಹಹ್ಹ...ಒಳ್ಳೆ ಲವಲವಿಕೆಯ ಬರಹ...ಖುಷಿಯಾಯ್ತು ಓದಿ..ಇಲ್ಲಿ ಕೋಳಿ ಕಾಟ ತಡೆಯೋದಕ್ಕೆ ಮಹತ್ವದ ಐಡಿಯಾಗಳನ್ನೆಲ್ಲ ಓದಿದರಂತೂ :)
ಈ ಕೋಳಿ ವಿಷಯವನ್ನ ಪತ್ರಿಕೆಯ ಮುಖಪುಟದಲ್ಲಿ ಹಾಕಿಸಿಬಿಡಿ...
ಓದಿದವರು ಅದನ್ನ ನೋಡ್ಕೋತಾರೆ..
ಏನಾದ್ರೊಂದು ತರಲೆ ಯೋಚನೆ ಮಾಡದಿದ್ರೆ ನಿಮಗೆ ನಿದ್ದೆ ಬರಲ್ಲ ಅನ್ಸತ್ತೆ ! ನಿದ್ದೆ ಮಾಡಿದಾಗಲೂ ಹುಂಜದ ಕಾಟವೇ? ಶಿವ ಶಿವ, ನಿಮ್ಮ ಈ ಸ್ಥಿತಿಗೆ ನನ್ನದೊಂದು ಮರುಕವಿರಲಿ..
oLLe kathe!:))
ಚೆನ್ನಾಗಿದೆ ಬರಹ.ಖುಷಿಯಾಯಿತು. ಸಮಯವಾದಾಗ ಒಮ್ಮ ಸಾಂಗತ್ಯ ಬ್ಲಾಗ್ ಗೆ ಭೇಟಿಕೊಡಿ. ಸಿನಿಮಾ ಕುರಿತು ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ಇದ ಚಿತ್ರ ವೇದಿಕೆ,ಗ್ರೂಪ್ ಬ್ಲಾಗಿಂಗ್.
ಸಾಂಗತ್ಯ
ನಮಸ್ತೆ..joman .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.
ಶುಭವಾಗಲಿ,
- ಶಮ, ನಂದಿಬೆಟ್ಟ
Chennagide... :)
ಮಾರಾಯಾ, ಸುಮ್ನೆ ಹಿಂದೂ ಕೋಳಿ ಅನ್ನು. ಮಿಕ್ಕಿದ್ದೆಲ್ಲ ತಾನೇ ಮುಂದುವರಿಯುತ್ತೆ.
(ಈಗಿನ ಪರಿಸ್ಥಿತಿ ಕಂಡು ಹೇಳ್ದೆ ಅಷ್ಟೆಯ. ತಲೆಕೆಡಿಸ್ಕೋಬೇಡ) ಶ್ಯಾನೆ ಸಂದಾಕಿ ಬರ್ದಿದಿಯ್ಯಾ. ಮುಂದುವರಿ
ಜೋಮನ್,
ಚೆನ್ನಾಗಿ ಬರೆದಿದ್ದರ .. ಎಲ್ಲಿಯ MG ರೋಡ್, ಎಲ್ಲಿಯ ಕಾಫಿ ಹೌಸ್ , ಎಲ್ಲಿಯ ಮರಿಯಪ್ಪನ ಪಾಳ್ಯ, ಅಟ್ ಲಾಸ್ಟ್,, ಅದೆಲ್ಲಿನ್ದನೋ ಬಂದ ಹುಂಜ,,,,, ಸಕತ್ ಮಾರಾಯರೇ... ಮದ್ಯದಲ್ಲಿ ಚಿತ್ರ, ಶಿವೂ ಅವರನ್ನು ಕರೆದು ತಂದಿದ್ದಿರ...
ಹೌದು ಏನ್ ಆಯಿತು ಅ ಹುಂಜದ ಕತೆ...? ನಿಮ್ಮ ಮಾತು ಕೇಳ್ತೋ ಅಥವಾ ಇನ್ನು ಇಲ್ವೋ...
ಬಿಡುವಾದಾಗ, ನಮ್ಮ ಬ್ಲಾಗಿಗ ಕಡೆಗೂ ಬಂದು ಇಣುಕಿಹೋಗಿ ಸರ್...
Guru
ನಮಸ್ತೆ,
ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/
priya geleya navirada niroopane...khushi aythu........
elliya kavi, elliya hunja....elliya mg road.... vah....great great man....really.....
hage summane odisikondu hoythu kanri.....
Post a Comment